ದಾವಣಗೆರೆ ಜ.01: ಪ್ರಾಚೀನ ಕಾಲದಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನ, ಸಲಕರಣೆ ಇಲ್ಲದ ಸಂದರ್ಭದಲ್ಲಿ ಉಳಿ ಮತ್ತು ಸುತ್ತಿಗೆಯಿಂದ ಸೂಕ್ಷ್ಮವಾಗಿ ಅದ್ಭುತ ಕೆತ್ತನೆ ಮಾಡಿ ವಿಶ್ವ ಪ್ರಸಿದ್ದಿ ಪಡೆದವರು ಅಮರಶಿಲ್ಪಿ ಜಕಣಾಚಾರಿ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಅಮರಶಿಲ್ಪ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಪ್ರಾಚೀನ ಕಾಲದ ವಿಶ್ವಪಾರಂಪರಿಕ ಇತಿಹಾಸವುಳ್ಳ ದೇವಾಲಯ, […]
ದಾವಣಗೆರೆ ಜ.01: ಪ್ರಾಚೀನ ಕಾಲದಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನ, ಸಲಕರಣೆ ಇಲ್ಲದ ಸಂದರ್ಭದಲ್ಲಿ ಉಳಿ ಮತ್ತು ಸುತ್ತಿಗೆಯಿಂದ ಸೂಕ್ಷ್ಮವಾಗಿ ಅದ್ಭುತ ಕೆತ್ತನೆ ಮಾಡಿ ವಿಶ್ವ ಪ್ರಸಿದ್ದಿ ಪಡೆದವರು ಅಮರಶಿಲ್ಪಿ ಜಕಣಾಚಾರಿ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಅಮರಶಿಲ್ಪ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದ ವಿಶ್ವಪಾರಂಪರಿಕ ಇತಿಹಾಸವುಳ್ಳ ದೇವಾಲಯ, ವಾಸ್ತುಶಿಲ್ಪ ಕೇಂದ್ರ, ಶಿಲೆಗಳು ಇಂದಿಗೂ ಉಳಿದಿವೆ ಎಂದರೆ, ಅದಕ್ಕೆ ಜಕಣಾಚಾರಿ ಅವರಂತಹ ಹೆಸರಾಂತ ಶಿಲ್ಪಿಗಳೇ ಕಾರಣ. ಪ್ರಸ್ತುತ ಇಷ್ಟೆಲ್ಲಾ ಆಧುನಿಕ, ತಂತ್ರಜ್ಞಾನ, ಅತ್ಯಾಧುನಿಕ ಸಲಕರಣೆಗಳು ಇದ್ದರೂ ಸಹ ಪ್ರಾಚೀನ ಕಾಲದ ವಾಸ್ತುಶಿಲ್ಪ ಕೆತ್ತನೆ ಮೀರಿ ಜನಪ್ರಿಯತೆ ಗಳಿಸಲು ಸಾಧ್ಯವಿಲ್ಲ. ಜಕಣಾಚಾರಿಯವರು ಕೆತ್ತನೆ ಮಾಡಿದ ಬೇಲೂರು, ಹಳೇಬೀಡು ದೇವಾಲಯ ಜಿಲ್ಲೆ, ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ಇಂದಿಗೂ ವಿಶ್ವಪ್ರಸಿದ್ದಿ. ಇದು ಕೇವಲ ಕಲ್ಲು ಕೆತ್ತನೆಯಷ್ಟೇ ಅಲ್ಲದೇ, ತಾಮ್ರ, ಬೆಳ್ಳಿ ಬಂಗಾರದ ಮೇಲೆಯೂ ತಮ್ಮ ಕೆತ್ತನೆ ಕೈಚಳಕ ತೋರ್ಪಡಿಸುತ್ತಾ ಬಂದಿದ್ದಾರೆ. ಆದ್ದರಿಂದ ಇಂತಹ ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ಮಾತನಾಡಿ, ಇಂದಿನ ಮಕ್ಕಳಿಗೆ ಕಟ್ಟು ಕಥೆಗಳ ಬದಲಾಗಿ ಉಪಮಾ, ಉಪಮೇಯ, ಸಾಹಿತ್ಯ ಮತ್ತು ಕಲೆ, ವಾಸ್ತುಶಿಲ್ಪದ ಇತಿಹಾಸದ ಬಗ್ಗೆ ತಿಳಿಸಬೇಕಿದೆ. ಉತ್ತರದಿಂದ ದಕ್ಷಿಣ ಭಾರತದುದ್ದಕ್ಕೂ ಹರಡಿಕೊಂಡಿರುವ ಗಾಂಧಾರ, ಮಥುರಾ, ಮತ್ತು ಹೊಯ್ಸಳ ಶೈಲಿಯ ಕಲೆ ಮತ್ತು ವಾಸ್ತುಶಿಲ್ಪ ಕಾಣಬಹುದು. ಅದರಲ್ಲಿಯೂ ಇಡೀ ಪ್ರಪಂಚದಲ್ಲಿ ಎಲ್ಲಿಯೂ ಕಾಣಲು ಸಿಗದೇ ಇರುವಂತಹ ಕಲೆಯೇ ಹೊಯ್ಸಳ ಶೈಲಿಯ ವಾಸ್ತುಶಿಲ್ಪ. ಹೊಯ್ಸಳ ಕಾಲದ ಬೇಲೂರು, ಹಳೇಬೀಡು ಹೊರತುಪಡಿಸಿದರೆ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಕೃಷ್ಣನಮೂರ್ತಿ ಕೆತ್ತನೆ ಮಾಡಲಾಗಿದೆ.
ಅಂತಹ ಪಾರಂಪರಿಕ ಇತಿಹಾಸ, ಸಂಸ್ಕೃತಿ ಕೊಟ್ಟು ದೇಶ, ರಾಜ್ಯ ಭಾಷೆಯನ್ನು ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟಂತಹ ಮಹಾನ್ ಪುರುಷ ಜಕಣಾಚಾರಿ. ಬೇಲೂರು ಹಳೇಬೀಡು ಅಷ್ಟೇ ಅಲ್ಲದೆ ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 40ಕ್ಕೂ ಹೆಚ್ಚು ದೇವಾಲಯ ನಿರ್ಮಾಣ ಮಾಡಲಾಗಿದೆ. ಹಾಗೆಯೇ ನಮ್ಮ ಜಿಲ್ಲೆಯ ಕಲ್ಲೇದೇವಪುರದಲ್ಲಿ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಕಾಣಬಹುದು. ಅದೇ ರೀತಿ ನೆರೆ ರಾಜ್ಯಗಳಲ್ಲಿ ಕೂಡ ತಮ್ಮ ಪ್ರತಿಭೆಯ ಅನಾವರಣಗೊಳಿಸುವ ಮೂಲಕ ಇಡೀ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದವರು ಅಮರಶಿಲ್ಪ ಜಕಣಾಚಾರಿ. ಇಂಥವರ ಜೀವನ, ಸಾಧನೆ, ಯಶೋಗಾಥೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ ಎಂದರು.
Read also : ಜ. 5 ರಂದು ವಾಲ್ಮೀಕಿ ಜಾತ್ರೆಯ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಾಜದ ಮುಖಂಡ ವೀರೇಶ್ ಆಚಾರಿ ಉಪನ್ಯಾಸ ನೀಡಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ತಹಶೀಲ್ದಾರ್ ಡಾ. ಅಶ್ವಥ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರಚಾರ್, ಗೌರವಾಧ್ಯಕ್ಷ ಪೂರ್ವಾಚಾರ್, ಕಾರ್ಯದರ್ಶಿ ಬಿ.ವಿ.ಶಿವಾನಂದ್, ಉಪಾಧ್ಯಕ್ಷ ಬಿ. ಸಿದ್ದಾಚಾರ್, ಆಡಳಿತಾಧಿಕಾರಿ ಬಿ.ಬಿ. ಜಗನ್ನಾಥ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.
Previous Article
ಜ. 5 ರಂದು ವಾಲ್ಮೀಕಿ ಜಾತ್ರೆಯ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ
Next Article
ಬ್ಯಾನರ್ ವಿಚಾರಕ್ಕೆ ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ, ಫೈರಿಂಗ್- ಗುಂಟೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಮೃತ್ಯು