Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮರ್ಯಾದೆಗೇಡು ಹತ್ಯೆ ಕಾಯ್ದೆ|ಮಾನ್ಯಪಾಟೀಲ್ ಹೆಸರಲ್ಲಿ ಜಾರಿಯಾಗಲಿ: ಬಸವರಾಜ್ ಸೂಳೆಬಾವಿ ಒತ್ತಾಯ

    2 weeks ago

    ಗದಗ: ಮರ್ಯಾದೆಗೇಡು ಹತ್ಯೆ ಕಾಯ್ದೆಯನ್ನು ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದಾಗೇಡು ಹತ್ಯೆಯಾದ ಮಾನ್ಯ ಪಾಟೀಲ್ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಬಸವರಾಜ್ ಸೂಳೆಬಾವಿ ಒತ್ತಾಯಿಸಿದರು. ಗದಗ ಘಟಕ ವತಿಯಿಂದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಮರ್ಯಾದಾ ಹತ್ಯೆ ವಿರೋಧಿಸಿ, ಹತ್ಯೆಯ ಹೊಣೆಗಾರಿಕೆ ಹೊತ್ತು ” ಪ್ರಾಯಶ್ಚಿತ್ತ ದಿನ”ವನ್ನು ಸತ್ಯಾಗ್ರಹದಲ್ಲಿ ಮಾತನಾಡಿದರು. ದೇಶದ ಜಾತಿ ವ್ಯವಸ್ಥೆ ಮನುಷ್ಯರನ್ನು ಭಿನ್ನವಾಗಿ ನೋಡುವಂತ ವ್ಯವಸ್ಥೆಯಲ್ಲಿದ್ದೆವೆ. 12ನೇ ಶತಮಾನದಲ್ಲಿ […]

    ಗದಗ: ಮರ್ಯಾದೆಗೇಡು ಹತ್ಯೆ ಕಾಯ್ದೆಯನ್ನು ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದಾಗೇಡು ಹತ್ಯೆಯಾದ ಮಾನ್ಯ ಪಾಟೀಲ್ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಬಸವರಾಜ್ ಸೂಳೆಬಾವಿ ಒತ್ತಾಯಿಸಿದರು.

    ಗದಗ ಘಟಕ ವತಿಯಿಂದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಮರ್ಯಾದಾ ಹತ್ಯೆ ವಿರೋಧಿಸಿ, ಹತ್ಯೆಯ ಹೊಣೆಗಾರಿಕೆ ಹೊತ್ತು ” ಪ್ರಾಯಶ್ಚಿತ್ತ ದಿನ”ವನ್ನು ಸತ್ಯಾಗ್ರಹದಲ್ಲಿ ಮಾತನಾಡಿದರು.

    ದೇಶದ ಜಾತಿ ವ್ಯವಸ್ಥೆ ಮನುಷ್ಯರನ್ನು ಭಿನ್ನವಾಗಿ ನೋಡುವಂತ ವ್ಯವಸ್ಥೆಯಲ್ಲಿದ್ದೆವೆ. 12ನೇ ಶತಮಾನದಲ್ಲಿ ಬಸವಣ್ಣವರು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಲಿಂಗಾಯತವನ್ನ ಲಿಂಗಾಯತರು ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿಸಿದ್ದೆವೆ. ಜಾಗತಿಕ ಲಿಂಗಾಯತ ಮಹಾಸಭಾ ಈ ಪ್ರಾಯಶ್ಚಿತ್ತವನ್ನು ಆಕ್ರೋಶಿತರಾಗಿ ಪ್ರತಿಭಟಿಸುತ್ತಿಲ್ಲ ಇಲ್ಲಿ ನಮ್ಮನ್ನೇ ನಾವು ಅವಲೋಕಿಸಿಕೊಳ್ಳಲು ಮಾಡುತ್ತಿರುವ ದಿನ ಎಂದರು.

    ಗದಗಿನ ಸಿದ್ದರಾಮ ಸ್ವಾಮಿಗಳು ಮಾತನಾಡಿ, “12ನೇ ಶತಮಾನದಲ್ಲಿ ಬಸವಣನವರು ಅನ್ಯಭಿನ್ನ ಸಂಸ್ಕೃತಿಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದರು. ಆದರೆ, ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೆಂದು ಸಾರುವ ಈ ಕಾಲದಲ್ಲಿ ಜಾತಿ ಶ್ರೇಷ್ಠತೆಯ ವ್ಯಸನದಲ್ಲಿ ಮಗಳನ್ನೇ ಮರ್ಯಾದಾ ಹತ್ಯೆ ಮಾಡುವಂತ ರಾಕ್ಷಸ ಮನಸ್ಥಿತಿಯನ್ನು ಕಂಡಾಗ ಬೇಸರವಾಗುತ್ತದೆ ಎಂದರು.

    Read also : ನೂತನ ರಥಕ್ಕೆ ಆವರಗೊಳ್ಳ ಹಿರೇಮಠದ ಶ್ರೀಗಳಿಂದ ಕಳಸಾರೋಹಣ

    ಧಾರವಾಡದ ಪ್ರೊ.ಶಶಿಧರ ತೋಟದೆವರು ಮಾತನಾಡಿ, ಮಾನ್ಯ ಪಾಟೀಲ್ ನನ್ನ ವಿದ್ಯಾರ್ಥಿನಿ ನಮ್ಮ ಹಿರಿಯ ಪ್ರೊಫೆಸರ್ ಸದಾನಂದಗೌಡ ಪಾಟೀಲ್ ಅವರ ಮೊಮ್ಮಗಳು. ಮಾನ್ಯ ನಮ್ಮ ಕಣ್ಣೇದುರೆ ಬೆಳೆದಿರುವ ಮಗಳು. ಈ ಘಟನೆ ನಡೆಯುವ ಪೂರ್ವದಲ್ಲಿ ಹಲವು ಬಾರಿ ನಾವು ಮಾನ್ಯಳ ತಂದೆಗೆ ತಿಳಿಸಿ ಹೇಳುವ ಕೆಲಸ ಮಾಡಿದೆವು. ಆ ವ್ಯಕ್ತಿಯಲ್ಲಿ ಇದ್ದಂತ ಜಾತಿ ಹಾಗೂ ಸ್ವಃ ಶ್ರೇಷ್ಠತೆಯ ವ್ಯಸನ ಅಂತ ಕ್ರೌರ್ಯ ಮಾಡಲು ಪ್ರೇರೇಪಿಸಿತು. ಇದು ರಾಕ್ಷಸ ಮನಸ್ಥಿತಿ” ಎಂದು ಮಾನ್ಯಳ ಜೊತೆಗಿನ ಬಾಂಧವ್ಯ ಹಾಗೂ ಘಟನೆಯ ಕುರಿತು ಖೇದ ವ್ಯಕ್ತಪಡಿಸಿದರು.

    ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತಿಚೆಗೆ ಮಾನ್ಯ ಪಾಟೀಲ್ ಮರ್ಯಾದಗೇಡು ಹತ್ಯ ಖಂಡಿಸಿ ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವ ಕೇಂದ್ರ ವಿವಿಧ ದಲಿತ-ಪ್ರತಗತಿಪರ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

    ಎಸ್.ಎಸ್.ಹರ್ಲಾಪುರ, ಶಿವನಗೌಡ ಗೌಡ, ಎಸ್.ಎ ಮುಜಿದ, ಎಚ್.ಡಿ.ಡಬರಿ, ಬಿ.ಆರ್.ದಿವದಾರ, ಎಲ್.ಎಮ್.ಹೊಸಳ್ಳಿ, ಮಹಾಂತೇಶ ಮದ್ನೂರ, ಪಾಂಡಪ್ಪ ಲಮಾಣಿ, ಮಾರುತಿ. ಕೆ.ಅಂಗಡಿ, ಕರಿಯಪ್ಪ ಸಂಶಿ, ಚನ್ನಬಸಪ್ಪ ಅಂಗಡಿ, ಎಮ್.ಬಿ.ಲಿಂಗದಾಳ, ಶರೀಫ್ ಬಿಳೆಯೆಲಿ, ಮುತ್ತು ಬೆಳೆಯೆಲಿ, ಆನಂದ ಸಿಂಗಾಡಿ, ಅನೀಲ್ ಕಾಳೆ ಪರಸುರಾಮ ಕಾಳೆ, ಯಲ್ಲಪ್ಪ ರಾಮಗೇರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಶ್ರೀದೇವಿ ಶೆಟ್ಡರ, ಗವರಕ್ಕ ಬಡಿಗಣ್ಣವರ, ಪದ್ಮಾ ಹಂಜಿಗಿ, ಗಿರಿಜಾ ಹಸಬಿ, ಸಹನಾ ಹಾತಲಗಿ, ಸುಜಾತ ವಾರದ, ಅಕ್ಕಮಹಾದೇವಿ ಚೆಟ್ಟಿ, ಶಿವಲೀಲಾ ಅಕ್ಕಿ, ಅನ್ನಪೂರ್ಣ ಬರಗುಂಡಿ, ಸರೋಜಾ ಮುಗುದ ತಡಸದ, ರೇಣುಕಾ ಕರಿಗೌಡರ, ಜಯಶ್ರೀ ಹುಬ್ಬಳ್ಳಿ, ಸುವರ್ಣ ಹೊಸಂಗಡಿ ಹಾಗೂ ಸರೋಜ ಲಿಂಗದಾಳ ಇದ್ದರು.

    Click here to Read More
    Previous Article
    ನೂತನ ರಥಕ್ಕೆ ಆವರಗೊಳ್ಳ ಹಿರೇಮಠದ ಶ್ರೀಗಳಿಂದ ಕಳಸಾರೋಹಣ
    Next Article
    ಮಂಡ್ಯ | ಕುರುಬರ ಸಂಘದ ಮಹಾಸಭೆಯ ತೀರ್ಮಾನವನ್ನು ಪ್ರಕಟಿಸಲಿ : ಬೀರೇಶ್

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment