Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ‘ನಕ್ಸಲ್ ಕಾರ್ಯಕರ್ತರಿಗೆ ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳಲಿ’ : ಶಾಂತಿಗಾಗಿ ನಾಗರೀಕ ವೇದಿಕೆ ಒತ್ತಾಯ

    1 week ago

    ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು ಶಾಂತಿಗಾಗಿ ನಾಗರೀಕ ವೇದಿಕೆ ಹೇಳಿತು. 2026 ಜನವರಿ 8, ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವೇದಿಕೆಯ ಮುಖ್ಯಸ್ಥರು ನಕ್ಸಲ್ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದು, ಎಲ್ಲಾ ಮಾಜಿ ನಕ್ಸಲರ ಪುನರ್ವಸತಿ ಕಾರ್ಯವನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. […]

    The post ‘ನಕ್ಸಲ್ ಕಾರ್ಯಕರ್ತರಿಗೆ ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳಲಿ’ : ಶಾಂತಿಗಾಗಿ ನಾಗರೀಕ ವೇದಿಕೆ ಒತ್ತಾಯ appeared first on nudikarnataka.



    ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು ಶಾಂತಿಗಾಗಿ ನಾಗರೀಕ ವೇದಿಕೆ ಹೇಳಿತು.

    2026 ಜನವರಿ 8, ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವೇದಿಕೆಯ ಮುಖ್ಯಸ್ಥರು ನಕ್ಸಲ್ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದು, ಎಲ್ಲಾ ಮಾಜಿ ನಕ್ಸಲರ ಪುನರ್ವಸತಿ ಕಾರ್ಯವನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

    ಕರ್ನಾಟಕ, ಕೇರಳ ಹಾಗೂ ತಮಿಳುನಾಡು ನಕ್ಸಲ್ ಮುಕ್ತಗೊಂಡು ನಾಳೆಗೆ ಒಂದು ವರ್ಷ. ನಿಮ್ಮ ನೇತೃತ್ವದಲ್ಲಿ ಈ ಮಹತ್ಕಾರ್ಯ ನಡೆಯಿತು. ಇದು ಸಾಧ್ಯವಾಗಿದ್ದು ಕಾಡಿನಲ್ಲಿದ್ದ ನಕ್ಸಲರ ಕೊನೆ ತಂಡ ತೆಗೆದುಕೊಂಡ ತೀರ್ಮಾನದಿಂದಾಗಿ. ಅವರು ಈ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿದ್ದು ತಮ್ಮ ಮೇಲಿನ ವಿಶ್ವಾಸದಿಂದಾಗಿ. ಆ ವಿಶ್ವಾಸಕ್ಕೆ ಗ್ಯಾರಂಟಿಯಾಗಿ ನಿಂತದ್ದು “ಶಾಂತಿಗಾಗಿ ನಾಗರೀಕರ ವೇದಿಕೆ”. ಒಂದು ವರ್ಷದ ಹಿಂದಿನ ಇಂದಿನ ದಿನದಂದು ನಮ್ಮ ಮನಸ್ಸು ಸಂತೋಷ ಹಾಗೂ ಹೆಮ್ಮೆಯಿಂದ ಕೂಡಿತ್ತು. ಆದರೆ ಒಂದು ವರ್ಷದ ನಂತರದ ಇಂದು ನಮ್ಮ ಮನಸ್ಸಿನ ತುಂಬ ನೋವು, ದುಗುಡ ಹಾಗೂ ಪಾಪ ಪ್ರಜ್ಞೆ ತುಂಬಿಕೊಂಡಿದೆ ಎಂದು ಹೇಳಿದ್ದಾರೆ.

    2025 ಜನವರಿ 8 ರಂದು ನಿಮ್ಮ ಕಛೇರಿಯಲ್ಲಿ, ನೂರಾರು ಮೀಡಿಯಾ ಕ್ಯಾಮರಾಗಳ ಎದುರು, ಅವರನ್ನು ಬರಮಾಡಿಕೊಳ್ಳುತ್ತಾ ತಾವು ಆಡಿದ ಮಾತು – “ಇಂದು ಅವರು ಕಾಡಿನಿಂದ ಜೈಲಿಗೆ ಬಂದಿದ್ದಾರೆ, ಆದಷ್ಟು ಬೇಗ ಜೈಲಿಂದ ನಾಡಿಗೆ ಬರುವಂತೆ ಮಾಡುವ ಜವಬ್ದಾರಿ ನಮ್ಮ ಸರ್ಕಾರ ಮೇಲಿದೆ. ಅದನ್ನು ನಿರ್ವಹಿಸುತ್ತೇವೆ”. ಆದರೆ ತಾವು ಕೊಟ್ಟ ಈ ಆಶ್ವಾಸನೆ ಇನ್ನೂ ಆಶ್ವಾಸನೆಯಾಗಷ್ಟೇ ಉಳಿದಿದೆ. ಈ ಸಂದರ್ಭದಲ್ಲಿ ಕೆಲವು ಕಠೋರ ವಾಸ್ತವಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇವೆ ಎಂದಿರುವ ಶಾಂತಿಗಾಗಿ ನಾಗರೀಕ ವೇದಿಕೆಯ ಮುಖ್ಯಸ್ಥರು ಮುಖ್ಯವಾಹಿನಿಗೆ ಬಂದ ನಕ್ಸಲ್ ಕಾರ್ಯಕರ್ತರು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು.

    ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು [ಲತಾ, ಸುಂದರಿ, ವನಜಾಕ್ಷಿ ರಮೇಶ್, ವಸಂತ್, ರವೀಂದ್ರ] ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ.

    ಅವರ ಕಾನೂನು ಪ್ರಕ್ರಿಯೆ ಒಂದು ಇಂಚು ಸಹ ಮುಂದಕ್ಕೆ ಹೋಗಿಲ್ಲ. ತ್ವರಿತ ವಿಚಾರಣೆಗಾಗಿ ಸರ್ಕಾರ ಪ್ರಸ್ತಾಪಿಸಿದ್ದ ವಿಶೇಷ ನ್ಯಾಯಲಯ ಕಾರ್ಯರೂಪಕ್ಕೆ ಬಂದಿಲ್ಲ.

    ಇದಕ್ಕೂ ಮೊದಲು ಮುಖ್ಯವಾಹಿನಿಗೆ ಬಂದಿದ್ದ ಕನ್ಯಾಕುಮಾರಿ ಕಳೆದ 9 ವರ್ಷಗಳಿಂದ ಜೈಲಿನಲ್ಲೇ ಇದ್ದಾರೆ. ಆಕೆಯ ಮಗು ಐದು ವರ್ಷ ಜೈಲಿನಲ್ಲೇ ಇತ್ತು, ಈಗ ಹೊರಗಿದೆ. ಕಂಬಿಗಳ ಹಿಂದಿನಿಂದಲೇ ಅಮ್ಮನನ್ನು ಆಗಾಗ ಕಂಡು ಬರುತ್ತಿದೆ.

    ಇವರೆಲ್ಲರ ಮೇಲೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಅನೇಕ ಕೇಸುಗಳಿವೆ. ನೀವು ಅಲ್ಲಿನ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದೀರಿ. ಅದು ಅಲ್ಲಿಗೇ ಮುಗಿಯಿತು. ಅಲ್ಲಿಂದಲೂ ಯಾವುದೇ ರೀತಿಯ ನೆರವು ಸರ್ಕಾರವನ್ನು ಮತ್ತು ನಮ್ಮನ್ನು ನಂಬಿ ಬಂದ ಈ ಆದಿವಾಸಿ, ದಲಿತ ಕಾರ್ಯಕರ್ತರುಗಳಿಗೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಅಲ್ಲದೇ ಈ ಹಿಂದೆ ಮುಖ್ಯವಾಹಿನಿಗೆ ಬಂದಿದ್ದ ಪದ್ಮನಾಭ, ರೇಣುಕಾ, ರಿಜ್ವಾನಾ, ಚೆನ್ನಮ್ಮ, ಜ್ಞಾನದೇವ, ಪರಶುರಾಮ ಎಲ್ಲರೂ ಕಡುಕಷ್ಟಗಳ ನಡುವೆ ಬದುಕು ನೂಕುತ್ತಿದ್ದಾರೆ. ಪರಿಹಾರವಾಗಿ ಬಂದ ಹಣ ಮಾಡಿಕೊಂಡಿದ್ದ ಸಾಲ ಮತ್ತು ಕೋರ್ಟು ಖರ್ಚುಗಳಿಗೇ ಸಾಲಲಿಲ್ಲ. ಪುನರ್ವಸತಿ ಸಂಬಂಧಿತ [ಸ್ವಯಂ ಉದ್ಯೋಗಕ್ಕೆ ನೆರವು ಮತ್ತು ವಸತಿ] ನಿರ್ಣಯಗಳು ಕಾಗದದ ಮೇಲಷ್ಟೇ ಉಳಿದಿವೆ.

    ನಕ್ಸಲರು ಮುಖ್ಯವಾಹಿನಿಗೆ ಬರುವಾಗ ಮಲೆನಾಡಿನ ಬಡಜನರ ಬದುಕನ್ನು ಬಾಧಿಸುತ್ತಿರುವ 18 ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದು ಅವನ್ನು ಸಹನೀಯಗೊಳಿಸುವ ಮಟ್ಟದ ಕ್ರಮಗಳನ್ನಾದರೂ ತೆಗೆದುಕೊಳ್ಳುವಂತೆ ತಮಗೆ ಮನವಿ ಮಾಡಿದ್ದರು. ಈ ಸಮಸ್ಯೆಗಳ ಅಧ್ಯಯನ ಮತ್ತು ಯೋಜಿತ ಪರಿಹಾರ ಕ್ರಮಗಳನ್ನು ರೂಪಿಸಲು ಕಳೆದ ಬಜೆಟ್ಟಿನಲ್ಲಿ ತಾವು 10 ಕೋಟಿ ಹಣವನ್ನು ಎತ್ತಿಟ್ಟಿದ್ದೀರಿ. ಆದರೆ ಆ ಹಣ ಮೂಲ ಉದ್ದೇಶದ ಜೊತೆ ಸಂಬಂಧವನ್ನೇ ಇಟ್ಟುಕೊಳ್ಳದೆ ಖರ್ಚಾಗಿದೆ. ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗಿದ್ದ ತೀರ್ಮಾನವೂ ಜಾರಿಯಾಗಿಲ್ಲ.

    ಸಾರಾಂಶದಲ್ಲಿ ನಕ್ಸಲೀಯರನ್ನು ಮನವೊಲಿಸಿ ಮುಖ್ಯವಾಹಿನಿಗೆ ತರುವುದರಲ್ಲಿ ಕರ್ನಾಟಕ ಮೇಲ್ಪಂಕ್ತಿ ಹಾಕಿಕೊಟ್ಟಿತು. ಆದರೆ ಕಾನೂನಿನ ನೆರವು ನೀಡುವುದರಲ್ಲಿ ಹಾಗೂ ಬದುಕು ಕಟ್ಟಿ ಕೊಡುವುದರಲ್ಲಿ ಸಂಪೂರ್ಣವಾಗಿ ಸೋತಿದೆ ಎಂದೇ ಹೇಳಬೇಕು.

    ಇಂದು ಉಪವಾಸ ಸತ್ಯಾಗ್ರಹ ನಡೆಸಬೇಕು ಎಂದುಕೊಂಡಿದ್ದೆವು ಆದರೂ ಕೊನೆ ಪ್ರಯತ್ನವೆಂದು ತಮ್ಮಲ್ಲಿ ಈ ಒತ್ತಾಯಪೂರ್ವಕ ಮನವಿಯನ್ನು ಮಾಡುತ್ತಿದ್ದೇವೆ. ಈ ಕೆಳಕಂಡ ಕ್ರಮಗಳನ್ನು ತಾವು ತೆಗೆದುಕೊಳ್ಳಲೇಬೇಕು.

    ಜೈಲಲ್ಲಿರುವವರನ್ನು ಇನ್ನೂ ಕಾಯಿಸುವುದು, ಮತ್ತೆ ಕೋರ್ಟಿಗೆ ಅಲೆಸುವುದು ಸರಿಯಲ್ಲ. ಹಾಗಾಗಿ ಛತ್ತೀಸ್ ಘಡ ಸರ್ಕಾರದ ಮಾದರಿಯಲ್ಲಿ ಅವರ ಮೇಲಿನ ಎಲ್ಲಾ ಕೇಸುಗಳನ್ನು ಹಿಂಪಡೆಯಲು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು.

    ಒಂಭತ್ತು ವರ್ಷದಿಂದ ಜೈಲಲ್ಲಿರುವ ಕನ್ಯಾಕುಮಾರಿಯ ಬಿಡುಗಡೆಗೆ ಆಧ್ಯತೆಯ ಮೇರೆಗೆ ಕ್ರಮ ತೆಗೆದುಕೊಳ್ಳಬೇಕು.

    ಹೊರಗಿರುವ ಎಲ್ಲಾ ಮಾಜಿ ನಕ್ಸಲೀಯರ ಪುನರ್ವಸತಿಗೆ ಸಂಬಂಧಿಸಿದ ತೀರ್ಮಾನಗಳು ಕೂಡಲೇ ಜಾರಿಯಾಗುವಂತೆ ತಾವು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.

    ನಕ್ಸಲ್ ಪ್ರದೇಶದ ಅಭಿವೃದ್ಧಿಗಾಗಿ ಮಂಜೂರಾಗಿರುವ ಹಣವನ್ನು ಮೂಲ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಜಾರಿಯಾಗುವಂತೆ ಮಾಡಲು ವಿಶೇಷ ಅಧಿಕಾರಿಯನ್ನು ನಿಯೋಜಿಸಿ ಸದ್ಬಳಕೆ ಮಾಡುವಂತೆ ತಾವು ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆಯ ನಗರಗೆರೆ ರಮೇಶ್, ವಿ.ಎಸ್. ಶ್ರೀಧರ್, ತಾರಾ ರಾವ್, ಬಿ.ಟಿ. ಲಲಿತಾ ನಾಯ್, ನೂರ್ ಶ್ರೀಧರ್ ಹಾಗೂ ವೀರಸಂಗಯ್ಯ ಉಪಸ್ಥಿತರಿದ್ದರು.

    ಕೃಪೆ : ನಾನು ಗೌರಿ.ಕಾಂ

    The post ‘ನಕ್ಸಲ್ ಕಾರ್ಯಕರ್ತರಿಗೆ ಸಿಎಂ ಕೊಟ್ಟ ಮಾತು ಉಳಿಸಿಕೊಳ್ಳಲಿ’ : ಶಾಂತಿಗಾಗಿ ನಾಗರೀಕ ವೇದಿಕೆ ಒತ್ತಾಯ appeared first on nudikarnataka.

    Click here to Read More
    Previous Article
    ಕೋಗಿಲು ಬಡಾವಣೆ ಅಕ್ರಮ ಮನೆ ತೆರವು: 26 ಜನರಿಗೆ ಮನೆ ಕೊಡಲು ಅವಕಾಶ- ಸಚಿವ ಜಮೀರ್
    Next Article
    ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗುವ ಸಾಧ್ಯತೆ ಇದೆ-ಡಿಸಿಎಂ ಡಿಕೆ ಶಿವಕುಮಾರ್

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment