Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಅಘನಾಶಿನಿ-ಬೇಡ್ತಿ ಪ್ರಾಜೆಕ್ಟ್ ಖಂಡಿಸಿ ಬೃಹತ್ ಪ್ರತಿಭಟನೆ.. ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್..!

    5 days ago

    ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹರಿಯುವ ಅಘನಾಶಿನಿ-ಬೇಡ್ತಿ ನದಿ ತಿರುವು ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳು ಇಡೀ ಜಿಲ್ಲೆಗೆ ಮಾರಕ ಎಂದು ಜಿಲ್ಲೆಯ ಜನರು ಹೋರಾಟಕ್ಕೆ ಮುಂದಾಗಿದ್ದು, ಜಿಲ್ಲೆಯ ಶಿರಸಿಯಲ್ಲಿ ಜನ ಸಮಾವೇಶ ಮೂಲಕ ಸಾವಿರಾರು ಜನರು ಸೇರಿ ಸರ್ಕಾರದ ನಡೆ ವಿರೋಧಿಸಿದ್ದಾರೆ. 

    aghanashini river and basti river (4)

    ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಅಘನಾಶಿನಿ ಹಾಗೂ ಬೇಡ್ತಿ ನದಿ ತಿರುವು ಮಾಡಲು ಸರ್ಕಾರ ಮುಂದಾಗಿದೆ. ಅಘನಾಶಿನಿ ನದಿಯನ್ನ ತಿರುವು ಮಾಡಿ ಚಿತ್ರದುರ್ಗದ ವೇದಾವತಿ ನದಿಗೆ ಜೋಡಣೆ ಮಾಡಲು ಹೊರಟರೆ, ಬೇಡ್ತಿ ನದಿ ತಿರುವು ಮಾಡಿ ವರದಾ ನದಿಗೆ ಜೋಡಣೆ ಮಾಡಲು ಹೊರಟಿದೆ. ಈ ಯೋಜನೆ ಜಾರಿಯಾದರೆ ಸಾವಿರಾರು ಎಕರೆ ಅರಣ್ಯ ಸಂಪತ್ತಿಗೆ ಹಾನಿಯಾಗುವುದರ ಜೊತೆಗೆ ಕೃಷಿಗೆ ದೊಡ್ಡ ಹಾನಿಯಾಗಲಿದ್ದು ಹಲವರು ನಿರಾಶ್ರಿತರಾಗಲಿರುವ ಹಿನ್ನಲೆಯಲ್ಲಿ ಜನರು ಹೋರಾಟಕ್ಕೆ ಮುಂದಾಗಿದ್ದಾರೆ. 

    ಇವತ್ತು ಈ ಯೋಜನೆ ವಿರೋಧಿಸಿ ಜಿಲ್ಲೆಯ ಸಾವಿರಾರು ಜನರು ಒಂದೆಡೆ ಸೇರಿ ಜನ ಸಮಾವೇಶದ ಮೂಲಕ ವಿರೋಧಿಸಿದರು. ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಯಿತು.

    ಇದನ್ನೂ ಓದಿ: ಮಂಗಳಸೂತ್ರ ಧರಿಸಿಯೇ ಸಮಂತಾ ಓಡಾಟ, ಅಭಿಮಾನಿಗಳ ಹೃದಯ ಗೆದ್ದ ಚೆಲುವೆ..!

    aghanashini river and basti river (3)

    ಸಮಾವೇಶದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಲ್ಲದೇ ವಿವಿಧ ಮಠಗಳ ಮಠಾಧೀಶರು ಹೋರಾಟಕ್ಕೆ ಬೆಂಬಲ ನೀಡಿದರು. ಸಮಾವೇಶದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ ಸಹ ಮಾಡಲಾಯಿತು. ಈ ಯೋಜನೆ‌ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಬಜೆಟ್ ನಲ್ಲಿ ಮಂಡನೆ ಮಾಡಿದ್ದು ಆಗ ಈಗಿನ ಸಂಸದರು ಕಾಗೇರಿ ಅವರು ಸ್ಪೀಕರ್ ಆಗಿದ್ದರು ವಿರೋಧಿಸಿಲ್ಲ ಎಂದು ಸಚಿವ ಮಂಕಾಳ ವೈದ್ಯ ಆರೋಪ ಮಾಡಿದರು.

    ಹೊರಗೆ ಹೋಗಿ ಬೇರೆ ಮಾತನಾಡೋಡನ್ನ ಬಿಡಬೇಕು

    ನದಿಗಳನ್ನ ದೇವರು ಸೃಷ್ಟಿ ಮಾಡಿದೆ. ಆದರೆ ಅದಕ್ಕೆ ವಿರೋಧವಾಗಿ ನದಿ ತಿರುವು ಮಾಡಲು ಹೊರಟಿದ್ದಾರೆ. ಅದಕ್ಕೆ ಒಮ್ಮತದಿಂದ ನಾವು ವಿರೋಧಿಸುತ್ತಿದ್ದೇವೆ. ಜಿಲ್ಲೆಯ ಜನರಿಗೆ ಸಮಸ್ಯೆ ಆಗಿದ್ದರೆ, ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಬ್ದಾರಿ. ಯಡಿಯೂರಪ್ಪ ಸಿಎಂ ಇದ್ದಾಗ ಈ ಯೋಜನೆ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಬಜೆಟ್​ನಲ್ಲಿ ಘೋಷಣೆಯಾದಾಗ ಯಾರೂ ಮಾತನಾಡಲಿಲ್ಲ. ಆಗ ಸ್ಪೀಕರ್ ಆಗಿ ಸಂಸದ ಕಾಗೇರಿ ಅವರೇ ಇದ್ದರು. ಅಂದೇ ಈ ವಿಷಯ ಅಲ್ಲಿಗೆ ನಿಂತಿದ್ದರೆ ಇಂದು ಹೋರಾಟ ಮಾಡುವ ಸ್ಥಿತಿ ಬರುತ್ತಿರಲಿಲ್ಲ. ಕೇಂದ್ರದಿಂದ ಈ ಯೋಜನೆಗೆ ಶೇಕಡಾ 90 ರಷ್ಟು ಅನುದಾನ ಕೊಡಬೇಕು, ರಾಜ್ಯ ಸರ್ಕಾರ 10% ಹಣ ಕೊಡಬೇಕು. ಈ ಎಲ್ಲಾ ಹಣ ನಿಮ್ಮ ತೆರಿಗೆಯ ಹಣವೇ ಆಗಿದೆ. ನಿಮ್ಮ ಹಣದಿಂದ ನಿಮಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ನಾವು ವೇದಿಕೆಯಲ್ಲಿ ಮಾತನಾಡಿದ ರೀತಿಯಲ್ಲಿ ನಡೆದುಕೊಳ್ಳಬೇಕು. ಹೊರಗೆ ಹೋಗಿ ಬೇರೆ ಮಾತನಾಡೋಡನ್ನ ಬಿಡಬೇಕು.

    ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ

    ಸ್ವಾಮೀಜಿ ಅವರಿಗೆ ಗೌರವ ಕೊಟ್ಟು ಮಾತನಾಡುತ್ತೇನೆ

    ನಾನು ವೇದಿಕೆಯಲ್ಲಿ ಏನು ಮಾತನಾಡಬೇಕು ಅನ್ನುವುದು ತಿಳಿದಿದೆ. ಸ್ವಾಮೀಜಿ ಅವರಿಗೆ ಗೌರವ ಕೊಟ್ಟು ಮಾತನಾಡುತ್ತೇನೆ. ನಾನು ಹಿಂದೆಯೂ, ಈಗಲೂ ಪರಿಸರ ರಕ್ಷಣೆ ವಿಚಾರದಲ್ಲಿ ನಿಮ್ಮೊಂದಿಗೆ ಇದ್ದೇನೆ. ನೀರು ಬೆಂಕಿ ಆರಿಸಲು ಬಳಸುವುದು, ಆದರೆ ನೀರು ಹೇಗೆ ಬೆಂಕಿ ಹಚ್ಚುತ್ತದೆ ಎನ್ನುವುದು ಎಲ್ಲರಿಗೆ ತಿಳಿದಿದೆ. ಹಿರಿಯ ಪರಿಶ್ರಮದಿಂದ ಪಶ್ಚಿಮ ಘಟ್ಟ ನಮಗೆ ಸಿಕ್ಕಿದೆ. ಶುದ್ದ ಗಾಳಿ, ನೀರು ನಮಗೆ ಸಿಕ್ಕಿದೆ. ಮುಂದಿನ ಪೀಳಿಗೆಗೆ ನಾವು ಇದನ್ನ ನೀಡಬೇಕು. ಅದಕ್ಕಾಗಿ ಈ ಯೋಜನೆಗೆ ವಿರೋಧಿಸಬೇಕು. ಈ ಯೋಜನೆ ವಿರುದ್ದ ಹೋರಟ ಹಿಂದಿನಿಂದಲೂ ನಡೆಯುತ್ತಿದೆ. ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ಸಚಿವ ಮಂಕಾಳ ವೈದ್ಯ ಕ್ಷೇತ್ರದಲ್ಲಿಯೇ ತರಲಾಗುತ್ತಿದೆ

    ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ 

    aghanashini river and basti river (1)

    ಸಮಾವೇಶದಲ್ಲಿ ಯೋಜನೆಯಿಂದ ಆಗುವ ಅಪಾಯದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು. ಅಲ್ಲದೇ ಜಿಲ್ಲೆಯಲ್ಲಿ ಈ ಯೋಜನೆ ವಿರುದ್ದ ಯಾವುದೇ ರಾಜಕೀಯ ಬೆರಸದೇ ಒಕ್ಕೊರಲಿನ ಹೋರಾಟ ಮಾಡಲು ನಿರ್ಣಯ ತೆಗೆದುಕೊಳ್ಳಲಾಯಿತು. ಒಟ್ಟಿನಲ್ಲಿ ಪಶ್ಚಿಮ ಘಟ್ಟದ ಜೀವನದಿ  ಬೇಡ್ತಿ, ಅಘನಾಶಿನಿ ನದಿ ವಿರೋಧಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಹೋರಾಟ ಪ್ರಾರಂಭವಾಗಿದ್ದು ಸರ್ಕಾರ ಈ ಬಗ್ಗೆ ಯಾವ ನಿಲುವು ತೋರಲಿದೆ ಎನ್ನುವುದನ್ನ ಕಾದು‌ ನೋಡಬೇಕಾಗಿದೆ.

    ಶಿರಸಿಯಿಂದ‌ ಶ್ರೀದರ ಜೊತೆ ಸಂದೀಪ್ ಸಾಗರ್ ನ್ಯೂಸ್​ಫಸ್ಟ್, ಕಾರವಾರ

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

    Click here to Read More
    Previous Article
    Rashi Bhavishya: ಹಳೆಯ ಶತ್ರುಗಳ ಕಾಟ, ಕುಟುಂಬದಲ್ಲಿ ಸಣ್ಣಪುಟ್ಟ ಕಲಹ
    Next Article
    ಮಂಗಳಸೂತ್ರ ಧರಿಸಿಯೇ ಸಮಂತಾ ಓಡಾಟ, ಅಭಿಮಾನಿಗಳ ಹೃದಯ ಗೆದ್ದ ಚೆಲುವೆ..!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment