Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಪೌರಾಯುಕ್ತೆ ಮೇಲೆ ದರ್ಪ ಕೇಸ್​ಗೆ ಟ್ವಿಸ್ಟ್​​.. ರಾಜೀವ್ ಗೌಡ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ

    1 day ago

    ಶಿಡ್ಲಘಟ್ಟ: ಪೌರಾಯುಕ್ತೆ ಮೇಲೆ ದರ್ಪ ತೋರಿದ್ದ ರಾಜೀವ್​​ಗೌಡ ಗಾಯಬ್ ಆಗಿದ್ದಾರೆ.. ಅಶ್ಲೀಲ ಪದ ಬಳಸಿ ದುರ್ವರ್ತನೆ ತೋರಿದ್ದ ಕೈ ಮುಖಂಡನ ಬಗ್ಗೆ ಪೊಲೀಸರ ದೋರಣೆಯೇ ಅನುಮಾನಕ್ಕೆ ಕಾರಣವಾಗಿದೆ. ರಾಜೀವ್ ಗೌಡನಿಂದ ನಿಂದನೆಗೆ ಒಳಗಾದವರ ಪರ ಕರವೇ ಧ್ವನಿ ಎತ್ತಿದೆ. ಇದ್ರ ಮಧ್ಯೆ ರಾಜೀವ್ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ.ಮಹಿಳಾ ಅಧಿಕಾರಿ ಮೇಲೆ ಪೌರುಷ ತೋರಿದ್ದ ರಾಜೀವ್ ಗೌಡ ತಲೆಮರೆಸಿಕೊಂಡಿದ್ದಾರೆ. ಒಣದರ್ಪ ಮೆರೆಯುವಾಗ ಇದ್ದ ಶೌರ್ಯ ಈಗ ಅಡಗಿ ಹೋಗಿದೆ. ಕೈ ನಾಯಕನಿಗೆ ಆಡಿದ ಮಾತುಗಳ ಪಾಪ ಹೆಗಲು ಏರಿದ್ದು ಬಂಧನದ ಭೀತಿ ಎದುರಾಗಿದೆ. ಇಷ್ಟಾದ್ರೂ ರಾಜೀವ್ ಗೌಡನ ಬಂಧನ ಏಕಿಲ್ಲ ಎಂಬ ಪ್ರಶ್ನೆ ಮೂಡಿದೆ. FIR ಆದ್ರೂ ಕೈ ಮುಖಂಡನ ಬಂಧನ ಏಕಿಲ್ಲ? ಅಮೃತಾಗೆ ಫೋನ್ ಕರೆ ಮಾಡಿ ರಾಜೀವ್ ಗೌಡ ಆಡಿದ್ದ ಅಶ್ಲೀಲ ಪದಗಳ ಆಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಮೃತಾಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ರಾಜೀವ್ ಗೌಡನ ವಿರುದ್ಧ ಮೂರು ದಿನಗಳ ಹಿಂದೆ ಎಫ್‌ಐಆರ್ ದಾಖಲಾಗಿದೆ. ಇಷ್ಟಾದ್ರೂ ಕೈ ಮುಖಂಡನ ಬಂಧನ ಏಕಿಲ್ಲ ಎಂಬ ಪ್ರಶ್ನೆ ಮೂಡಿದೆ. ಪೌರಾಯುಕ್ತೆಗೆ ಕ್ಷಮೆಯಾಚಿಸಿ ವಿಡಿಯೋ ರಿಲೀಸ್ ಮಾಡಿದ್ದ ರಾಜೀವ್ ಗೌಡ ನಾಪತ್ತೆಯಾಗಿದ್ದಾರೆ. ರಾಜೀವ್ ಗೌಡನ ಬಂಧಿಸದೆ ಪೊಲೀಸರೇ ನಾಟಕವಾಡ್ತಿದ್ದಾರಾ? ಎಂಬ ಅನುಮಾನ ದಟ್ಟವಾಗಿದೆ. ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡನ ಬಂಧನಕ್ಕೆ 4 ತಂಡ ರಚನೆ ಮಾಡಿದ್ರೂ 3 ದಿನಗಳು ಕಳೆದ್ರೂ ಅರೆಸ್ಟ್ ಮಾಡದಿರೋ ಪೊಲೀಸರ ನಡೆಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.   ಪೌರಾಯುಕ್ತೆ ಅಮೃತಾ ಬೆನ್ನಿಗೆ ನಿಂತ ಕರವೇ ಸಿಂಹ ಸೇನೆ ರಾಜೀವ್ ಗೌಡನಿಂದ ಧಮ್ಕಿ ಹಾಕಿಸಿಕೊಂಡು ಕಣ್ಣೀರಿಟ್ಟಿದ್ದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಬೆನ್ನಿಗೆ ಹಲವು ಸಂಘಟನೆಗಳು ನಿಂತಿವೆ. ಇದೀಗ ಕರವೇ ಸಿಂಹ ಸೇನೆ ಕಾರ್ಯಕರ್ತರು ಅಮೃತಾ ಗೌಡಗೆ ಬೆಂಬಲ ಸೂಚಿಸಿದ್ದಾರೆ. ಇವತ್ತು ಶಿಡ್ಲಘಟ್ಟ ನಗರಸಭೆಗೆ ಭೇಟಿ ನೀಡಿದ್ದ ಕರವೇ ಸಿಂಹ ಸೇನೆ ಕಾರ್ಯಕರ್ತರು ಅಮೃತಾಗೌಡಗೆ ರೇಷ್ಮೆ ಸೀರೆ, ಹೂ-ಹಣ್ಣು ಅರಿಶಿನ-ಕುಂಕುಮದ ಬಾಗಿನ ನೀಡಿ ಸಾಂತ್ವನ ಹೇಳಿದ್ರು. ಕರವೇ ಕಾರ್ಯಕರ್ತರು ಬಾಗಿನ ನೀಡ್ತಿದ್ದಂತೆ ಪೌರಾಯುಕ್ತೆ ಅಮೃತಾ ಭಾವೋದ್ವೇಗಕ್ಕೆ ಒಳಗಾದ್ರು.  ರಾಜೀವ್ ಗೌಡ ಬೆನ್ನುಬಿದ್ದ ಮತ್ತೊಂದು ವಂಚನೆ ಆರೋಪ! ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲ ಮಾತುಗಳನ್ನ ಆಡಿದ ಬಳಿಕ ಅಕ್ರಮಗಳು, ವಂಚನೆಗಳು ಅವರ ಬೆನ್ನುಬಿದ್ದಿವೆ. ಇದೀಗ ರಾಜೀವ್ ವಿರುದ್ಧ ಅಕ್ರಮ ಲೇಔಟ್ ನಿರ್ಮಾಣ ಮಾಡಿ ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ. ಹೊಸಕೋಟೆ ಮಂಡೂರು ವ್ಯಾಪ್ತಿಯಲ್ಲಿ ಜಮೀನು ಮಾರಾಟ ಮಾಡಿ ನೂರಾರು ಜನಕ್ಕೆ ರಾಜೀವ್ ವಂಚಿಸಿದ್ದಾರೆ ಅಂತ ಸಂತ್ರಸ್ತರು ಆರೋಪಿಸಿದ್ದಾರೆ. ಮೊದಲು ರಾಜಣ್ಣ ಎಂಬ ಹೆಸರು ಹೊಂದಿದ್ದ ಈತ, ಹಲವು ಪ್ರಕರಣಗಳ ಬಳಿಕ ರಾಜೀವ್ ಅಂತ ಹೆಸರು ಬದಲಿಸಿಕೊಂಡಿದ್ದಾನೆ ಅಂತ ಈತನ ಅಸಲಿ ಮುಖವನ್ನ ಸಂತ್ರಸ್ತರು ತೆರೆದಿಟ್ಟಿದ್ದಾರೆ. ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್ ಅವ್ಯವಹಾರ, ಕೋಟಿ ಕೋಟಿ ವಂಚನೆ, ರೌಡಿಗಳ ಮೂಲಕ ಗೂಂಡಾಗಿರಿ, ಬಡವರ ಜಮೀನು ಕಬಳಿಸಿ ಅವರ ಮೇಲೆಯೇ ಕೇಸ್ ಹಾಕಿ ಭ್ರಷ್ಟಾಚಾರ ಹೀಗೆ ರಾಜೀವ್ ಗೌಡ ವಿರುದ್ಧ ನೂರಾರು ಕೇಸ್​ಗಳಿವೆ. ಇವೆಲ್ಲಾ ಕೇಸ್‌ಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಶಿಕ್ಷೆ ಕೊಡಿಸ್ಬೇಕು ಅನ್ನೋ ಕೂಗು ಕೇಳಿಬಂದಿದೆ. ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
    Click here to Read More
    Previous Article
    ಹೈಕಮಾಂಡ್​​ನಿಂದ ಡಿಕೆಶಿಗೆ ಸಿಕ್ಕೇಬಿಡ್ತಾ ಗುಡ್​ನ್ಯೂಸ್​​? ಸಿಎಂ ಸಿದ್ದರಾಮಯ್ಯ ಕಥೆಯೇನು?
    Next Article
    ಸಂಸದರ ಗುಂಡು ಎಸೆತ, ಆರ್ಸಿಬಿಗೆ ಬೇಡವೇ ಬೆಂಗಳೂರು ಬ್ರ್ಯಾಂಡ್​ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment