Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಯುವಜನತೆಯನ್ನು ಸೆಳೆಯುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ ; ಪೂರ್ಣಚಂದ್ರ ತೇಜಸ್ವಿ

    2 weeks ago

    ಕುವೆಂಪು ಅವರ ಸಾಹಿತ್ಯದಲ್ಲಿ ಎಲ್ಲಾ ಕಾಲಕ್ಕೂ ಯುವಜನತೆಯನ್ನು ಸೆಳೆಯುವ ಮಾಸ್‌ಶಕ್ತಿಯಿದೆ ಎಂದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅಭಿಪ್ರಾಯಪಟ್ಟರು. ಮಂಡ್ಯ ನಗರದ ಕಲಾಮಂದಿರದಲ್ಲಿ ನೆಲದನಿ ಬಳಗ ಮಂಗಲ ಆಯೋಜಿಸಿದ್ದ ಕುವೆಂಪು ಅವರ ೧೨೧ನೇ ವರ್ಷದ ಜನ್ಮದಿನ ಪ್ರಯುಕ್ತ ವಿದೇಶದಲ್ಲೂ ಭರ್ಜರಿ ಯಶಸ್ಸು ಕಂಡ ಕನ್ನಡ ನಾಟಕ “ನನ್ನ ತೇಜಸ್ವಿ” ನಾಟಕ ಪ್ರದರ್ಶನ ಮತ್ತು ಅಭಿನಂಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕುವೆಂಪು ಅಂದ್ರೆ ಒಂಥರ ರೋಮಾಂಚನ, ರಸಋಷಿ, ರಾಷ್ಟ್ರಕವಿ, ಒಬ್ಬ ಮನೆಯ ತಾತನ ರೀತಿ ನೋಡುವುದು […]

    The post ಯುವಜನತೆಯನ್ನು ಸೆಳೆಯುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ ; ಪೂರ್ಣಚಂದ್ರ ತೇಜಸ್ವಿ appeared first on nudikarnataka.



    ಕುವೆಂಪು ಅವರ ಸಾಹಿತ್ಯದಲ್ಲಿ ಎಲ್ಲಾ ಕಾಲಕ್ಕೂ ಯುವಜನತೆಯನ್ನು ಸೆಳೆಯುವ ಮಾಸ್‌ಶಕ್ತಿಯಿದೆ ಎಂದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅಭಿಪ್ರಾಯಪಟ್ಟರು.

    ಮಂಡ್ಯ ನಗರದ ಕಲಾಮಂದಿರದಲ್ಲಿ ನೆಲದನಿ ಬಳಗ ಮಂಗಲ ಆಯೋಜಿಸಿದ್ದ ಕುವೆಂಪು ಅವರ ೧೨೧ನೇ ವರ್ಷದ ಜನ್ಮದಿನ ಪ್ರಯುಕ್ತ ವಿದೇಶದಲ್ಲೂ ಭರ್ಜರಿ ಯಶಸ್ಸು ಕಂಡ ಕನ್ನಡ ನಾಟಕ “ನನ್ನ ತೇಜಸ್ವಿ” ನಾಟಕ ಪ್ರದರ್ಶನ ಮತ್ತು ಅಭಿನಂಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಕುವೆಂಪು ಅಂದ್ರೆ ಒಂಥರ ರೋಮಾಂಚನ, ರಸಋಷಿ, ರಾಷ್ಟ್ರಕವಿ, ಒಬ್ಬ ಮನೆಯ ತಾತನ ರೀತಿ ನೋಡುವುದು ಒಂದುಕಡೆ, ನನ್ನ ಪ್ರಕಾರ ಕುವೆಂಪು ಅಂದರೆ ಮಾಸ್, ಅವರ ಸಾಹಿತ್ಯದಲ್ಲಿ ಎಲ್ಲಾ ಕಾಲಕ್ಕೂ ಯುವಜನತೆಯನ್ನು ಸೆಳೆಯುವ ಮಾಸ್‌ಶಕ್ತಿಯಿದೆ ಎಂದು ನುಡಿದರು.

    ಸಿನಿಮಾ ರಂಗದಲ್ಲಿ ಹಿರೋಗಳನ್ನು ಮಾಸ್‌ರೀತಿ ತೋರಿಸಲು, ಸಾಹಿತ್ಯ, ಸಂಗೀತ ರಚಿಸಲಾಗುತ್ತದೆ, ಕುವೆಂಪು ಅವರಿಗೆ ಮಾಸ್ ರೀತಿಯಲ್ಲಿ ಜನರ ಮನ ಹಿಡಿದಿಡುವ ಬರವಣೆಯಲ್ಲಿ ಎಲ್ಲಾ ಶಕ್ತಿಯಿದೆ ಎಂದರು.
    ಬಾರಿಸು ಕನ್ನಡ ಡಿಂಡಿಮವ…ಗೀತೆಯಲ್ಲಿ ಯುವ ಮನಸ್ಸುಗಳನ್ನು ರೋಮಾಂಚನ ಗೊಳಿಸಿತ್ತದೆ, ಎಷ್ಟೋ ಸಾಹಿತಿಗಳು ಇಂತಹ ಮಾಸ್ ರೀತಿಯ ಹಾಡುಗಳನ್ನು ಕಟ್ಟಲಿಲ್ಲ ಎಂದು ಹೇಳಿದರು.

    ಕುವೆಂಪು ಅವರ ಸಾಹಿತ್ಯದಲ್ಲಿ ಯೂತ್ ಐಕಾನ್‌ನಂತಹ ಸಾಲುಗಳಿವೆ, ನಾವು ಅವರನ್ನು ಯೂತ್ ಐಕಾನ್‌ರೀತಿ ಪರಿಚಯಮಾಡಬೇಕಿದೆ, ಹೊಸತಲೆಮಾರಿಗೆ ಇದೇ ರೀತಿ ಪರಿಚಯಿಸೋಣ ಎಂದರು.

    ಇದೇ ಸಂಧರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ, ಪ್ರಸೂತಿ ತಜ್ಞೆ ಡಾ.ಬಿ.ಎಸ್.ಪ್ರಭಾವತಿ, ಲೇಖಕಿ ಡಾ.ಸುಕನ್ಯಾ ಸೂನಗಹಳ್ಳಿ ಇವರನ್ನು ಅಭಿನಂದಿಸಲಾಯಿತು. ಕಲಾಮಾಧ್ಯಮ ಅಭಿನಯಿಸಿದ ನನ್ನ ತೇಜಸ್ವಿ ನಾಟಕನ್ನು ಬಿ.ಎಂ.ಗಿರಿರಾಜ ಅವರ ರಂಗರೂಪ-ನಿರ್ದೇಶನದಲ್ಲಿ ಕಲಾವಿದರು ಅಭಿನಯಿಸಿ ಸಭಿಕರ ಮನಸೊರೆಗೊಂಡರು.

    ಕಾರ್ಯಕ್ರಮದಲ್ಲಿ ರೈತನಾಯಕಿ ಸುನಂದ ಜಯರಾಂ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ಮಹಿಳಾ ಮುನ್ನಡೆ ಜಿಲ್ಲಾ ಕಾರ್ಯದರ್ಶಿ ಶಿಲ್ಪಾ, ಡಾ.ರವಿಕುಮಾರ್, ನೆಲದನಿ ಬಳಗದ ಪೋಷಕಿ ರುಕ್ಮಿಣಿ ಶಂಕರೇಗೌಡ, ಅಧ್ಯಕ್ಷ ಲಂಕೇಶ್ ಮಂಗಲ, ಪದಾಧಿಕಾರಿಗಳಾದ ಎಂ.ಸಿ ಕುಮಾರ್‌ಗೌಡ, ಪ್ರತಾಪ್ ಮಾರಸಿಂಗನಹಳ್ಳಿ, ಶಿವಮಲ್ಲು, ಕೋಮಲ್ ಕುಮಾರ್, ಸುಬ್ರಹ್ಮಣ್ಯ, ನಾಗೇಶ್ ಹನಿಯಂಬಾಡಿ, ಮಂಜು ಮಳವಳ್ಳಿ, ರಕ್ಷಿತ್ ರಾಜ್, ಟಿ.ಎನ್.ಲೋಕೇಶ್, ಸಿ.ನೀಲಶಿವಮೂರ್ತಿ, ಮಹಾಲಕ್ಷ್ಮಿಕೋಮಲ್ ಕುಮಾರ್, ಸುನೀತಾ ಲಂಕೇಶ್ ಮತ್ತಿತರರಿದ್ದರು.

    The post ಯುವಜನತೆಯನ್ನು ಸೆಳೆಯುವ ಶಕ್ತಿ ಕುವೆಂಪು ಸಾಹಿತ್ಯಕ್ಕಿದೆ ; ಪೂರ್ಣಚಂದ್ರ ತೇಜಸ್ವಿ appeared first on nudikarnataka.

    Click here to Read More
    Previous Article
    ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳ ಕಲಾಪ ಪ್ರಾಯೋಗಿಕ ನೇರಪ್ರಸಾರ ಆರಂಭ
    Next Article
    ಮಂಡ್ಯ ಜಿಲ್ಲಾ ನೂತನ ಪೊಲೀಸ್ ವರಿಷ್ಟಾಧಿಕಾರಿ ಶೋಭಾರಾಣಿ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment