Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ರೆಸಾರ್ಟ್ ರಾಜಕಾರಣ : ಕೃಷ್ಣ ಆರೋಪ

    2 weeks ago

    ಮಂಡ್ಯ ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಂ.ಎಲ್.ಸುರೇಶ್ ಅವರು ಕಾರ್‍ಯಕಾರಿ ಮಂಡಳಿಯನ್ನು ಮುಂದುವರೆಸುವ ಸಂಬಂಧ ಸಂಘದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸದೇ ಏಕಾಏಕಿಯಾಗಿ ಚರ್ಚೆಗೆ ಮುಂದಾಗಿದ್ದಾರೆ ಎಂದು ಸಂಘದ ನಿರ್ದೇಶಕ ಕೃಷ್ಣ ಆರೋಪ ಮಾಡಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವ ಸದಸ್ಯರ ಸಭೆಗೂ ಮುನ್ನ ಡಿ.೧೩ರಂದು ಸಾಮಾನ್ಯ ಸಭೆ ನಡೆಸಿದ್ದ ಸುರೇಶ್ ಅವರು, ಅಲ್ಲಿಯೂ ಚುನಾವಣೆ ನಡೆಸದೇ ಹಾಲಿ ಇರುವ ಕಾರ್‍ಯಕಾರಿ ಮಂಡಳಿಯನ್ನು ಮುಂದುವರೆಸುವ ವಿಷಯವಾಗಿ ಪ್ರಸ್ತಾಪವನ್ನೂ ಮಾಡಿರಲಿಲ್ಲ ಎಂದರು. ಸಂಘ […]

    The post ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ರೆಸಾರ್ಟ್ ರಾಜಕಾರಣ : ಕೃಷ್ಣ ಆರೋಪ appeared first on nudikarnataka.



    ಮಂಡ್ಯ ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಂ.ಎಲ್.ಸುರೇಶ್ ಅವರು ಕಾರ್‍ಯಕಾರಿ ಮಂಡಳಿಯನ್ನು ಮುಂದುವರೆಸುವ ಸಂಬಂಧ ಸಂಘದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸದೇ ಏಕಾಏಕಿಯಾಗಿ ಚರ್ಚೆಗೆ ಮುಂದಾಗಿದ್ದಾರೆ ಎಂದು ಸಂಘದ ನಿರ್ದೇಶಕ ಕೃಷ್ಣ ಆರೋಪ ಮಾಡಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವ ಸದಸ್ಯರ ಸಭೆಗೂ ಮುನ್ನ ಡಿ.೧೩ರಂದು ಸಾಮಾನ್ಯ ಸಭೆ ನಡೆಸಿದ್ದ ಸುರೇಶ್ ಅವರು, ಅಲ್ಲಿಯೂ ಚುನಾವಣೆ ನಡೆಸದೇ ಹಾಲಿ ಇರುವ ಕಾರ್‍ಯಕಾರಿ ಮಂಡಳಿಯನ್ನು ಮುಂದುವರೆಸುವ ವಿಷಯವಾಗಿ ಪ್ರಸ್ತಾಪವನ್ನೂ ಮಾಡಿರಲಿಲ್ಲ ಎಂದರು.

    ಸಂಘ ಆರಂಭವಾದ ೧೯೫೦ರಿಂದ ಇಲ್ಲಿಯವರೆಗೂ ಅಧ್ಯಕ್ಷರ ಅವಿರೋಧ ಆಯ್ಕೆಯಾಗುತ್ತಿತ್ತು. ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ರೆಸಾರ್ಟ್ ರಾಜಕಾರಣ ಮಾಡುವ ಮೂಲಕ ಇವರು ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಪ್ರಥಮ ಭಾರಿಗೆ ಪೊಲೀಸ್ ಭದ್ರೆತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಸಿದ್ದಾರೆ ಎಂದು ದೂರಿದರು.

    ಸರ್ವ ಸದಸ್ಯರ ಸಭೆ ಕರೆದು ಹಾಲಿ ಇರುವ ಕಾರ್‍ಯಕಾರಿ ಮಂಡಳಿ ಮುಂದುವರೆಸಬಹುದು ಎಂದು ಸಹಕಾರ ಸಂಘಗಳ ಇಲಾಖೆಯ ಅಧಿಕಾರಿ ತಿಳಿಸಿರುವುದಾಗಿ ಹೇಳಿದ್ದಾರೆ. ಕುರುಬರ ಸಂಘವು ಸಹಕಾರ ಸಂಘದ ಅಡಿಯಲ್ಲಿ ಇರದ ಕಾರಣ ಸಂಘದ ಬೈಲಾದಂತೆ ೫ ವರ್ಷಗಳಿಗೆ ಚುನಾವಣೆ ನಡೆಯಲೇಬೇಕೆಂದು ಸದಸ್ಯರು ಒತ್ತಾಯಿಸಿದ್ದಕ್ಕೆ ಪೊಲೀಸ್ ಭದ್ರತೆಯಲ್ಲಿ ಸಭೆಯಿಂದ ಹೊರ ನಡೆದಿದ್ದಾರೆ ಎಂದು ಹೇಳಿದರು.

    ಹಲವು ಸದಸ್ಯರು ಸಂಘದ ಆಯ-ವ್ಯಯದಲ್ಲಿ ಅನುಮಾನ ವ್ಯಕ್ತಪಡಿಸಿದಾಗ ಯಾವುದಕ್ಕೂ ಸರಿಯಾದ ಉತ್ತರ ನೀಡದ ಕಾರಣ ಭ್ರಷ್ಟ ಅಧ್ಯಕ್ಷ ಎಂದು ಘೋಷಣೆ ಕೂಗಲಾಗಿದೆ. ಸಂಘದ ಸಭೆಯಲ್ಲಿ ಸದಸ್ಯರಾದ ಪಾಂಡವಪುರ ನವೀನ್ ಹಾಗೂ ಚಂದಳ್ಳಿ ಶ್ರೀಧರ್ ಭಾಗವಹಿಸಿದ್ದರು. ಅವರನ್ನು ಸದಸ್ಯರಲ್ಲ, ಗೂಂಡಾಗಳು ಎಂದು ಸಂಭೋಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

    ವಿನಃ ಕಾರಣ ನಡಾವಳಿಯನ್ನು ದಾಖಲಿಸದೇ ಬಾಗಿಲಿನಲ್ಲಿ ನಡಾವಳಿ ಪುಸ್ತಕವಿಟ್ಟು ಸದಸ್ಯರಿಂದ ಸಹಿ ಪಡೆಯಲಾಗುತ್ತಿದ್ದದ್ದನ್ನು ಖಂಡಿಸಿದಕ್ಕೆ ಗೊಂದಲ ಸೃಷ್ಠಿಯಾಗಿದೆ. ನಡಾವಳಿ ಪುಸ್ತಕವನ್ನು ಸಭೆಯಲ್ಲಿ ಹಾಜರು ಪಡಿಸದೇ ತಮ್ಮಿಚ್ಚೆಯಂತೆ ಆಡಳಿತ ಮುಂಡಳಿ ಮುಂದುವರೆಸುವ ಸಂಬಂಧ ನಿರ್ಣಯ ದಾಖಲಿಸಲು ನಡೆಸಿದ ಹುನ್ನಾರ ಖಂಡಿಸಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆಂದರು.
    ಚಂದಳ್ಳಿ ಶ್ರೀಧರ್ ಮಾತನಾಡಿ, ೨೦೨೫ರ ಆ.೫ರಂದು ಸಂಘದ ಸದಸ್ಯತ್ವ ಪಡೆದಿದ್ದೇನೆ. ಆದರೂ ನನ್ನನ್ನು ಸದಸ್ಯನಲ್ಲ ಎನ್ನಲಾಗುತ್ತಿದೆ. ಸಂಘದ ಬೈಲಾ ಪ್ರಕಾರ ಸಂಘದ ಸದಸ್ಯತ್ವ ಪಡೆದವರು ನೇರವಾಗಿ ಚುನಾವಣೆಯಲ್ಲಿ ಮತ ಹಾಕಲು ಅರ್ಹರಾಗಿದ್ದಾರೆ. ಚುನಾವಣೆಗೆ ಆಗ್ರಹಿಸಿದ್ದಕ್ಕೆ ನನಗೆ ಮತ್ತು ಸಮುದಾಯಕ್ಕೆ ಗೂಂಡಾ ಪಟ್ಟ ಕಟ್ಟಿರುವುದು ಸರಿಯಲ್ಲ ಎಂದು ಆಕ್ರೋಶಗೊಂಡರು.

    ಹಾಲಿ ಮಳವಳ್ಳಿ ತಾಲೂಕು ಸಂಘದ ನಿರ್ದೇಶಕನಾಗಿದ್ದೇನೆ. ಜಿಲ್ಲಾ ಸಂಘದ ಮಾಜಿ ಅಧ್ಯಕ್ಷೆ ವಸಂತಮ್ಮ ಅವರ ಪುತ್ರನಾಗಿದ್ದು, ಸಂಘದ ಸದಸ್ಯತ್ವವನ್ನು ಪಡೆದಿದ್ದೇನೆ. ತಾತ ಜಮೀನ್ದಾರ್ ಜವರೇಗೌಡರು ಪಾರಂಪರಿಕ ಜಮೀನ್ದಾರರಾಗಿದ್ದಾರೆ. ಆದ್ದರಿಂದ ಮಳವಳ್ಳಿಯಲ್ಲಿ ಹತ್ತಾರು ಎಕರೆ ಜಮೀನಿದೆ ಅದಕ್ಕೆ ಭೂಗಳ್ಳ ಎಂದಿದ್ದಾರೆ. ಇದಕ್ಕೆ ಅವರು ಸಾಕ್ಷಿ ನೀಡಲಿ ಎಂದು ಸವಾಲು ಹಾಕಿದರು.

    ಗೋಷ್ಠಿಯಲ್ಲಿ ನಿರ್ದೇಶಕ ಅಣಸಾಲೆ ಶಿವಣ್ಣ, ಗುರುಪ್ರಸಾದ್, ಆರ್.ಬಾಸ್ಕರ್, ಚನ್ನಮಾದ ಹೆಗಡೆ, ಸಿ.ಟಿ.ಬೀರೇಶ್, ಡಿ.ಆರ್.ಬಸವರಾಜ್, ರಮೇಶ್ ಇದ್ದರು.

    The post ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ರೆಸಾರ್ಟ್ ರಾಜಕಾರಣ : ಕೃಷ್ಣ ಆರೋಪ appeared first on nudikarnataka.

    Click here to Read More
    Previous Article
    ಜ.5 ರಿಂದ 11 ರವರೆಗೆ ತುಳುಕೂಟದ ಕೆಮ್ತೂರು ತುಳು ನಾಟಕ ಪರ್ಬ
    Next Article
    ಹೊಸವರ್ಷಕ್ಕೆ ಕೇಂದ್ರ ಸರ್ಕಾರದ ಶಾಕ್ ; ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment