Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಜಕಣಾಚಾರಿ : ಕೆ.ಆರ್. ನಂದಿನಿ

    2 weeks ago

    ಕಲೆಗೆ ಶ್ರದ್ದೆಗೆ ಮತ್ತು ಶಕ್ತಿಗೆ ಕೊನೆ ಇಲ್ಲ ಎಂಬುದನ್ನು ನಿರೂಪಿಸಿದವರು ಹಾಗೂ ಲೇಖನಿಯಲ್ಲೇ ಕಾವ್ಯ ಬರೆಯುವುದು ಕಷ್ಟಕರ, ಆಂತದರಲ್ಲಿ ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಅಮರಶಿಲ್ಪಿ ಜಕಣಾಚಾರಿ ಎಂದು ಮಂಡ್ಯ ಜಿ.ಪಂ.ಸಿಇಓ ಕೆ.ಆರ್ ನಂದಿನಿ ತಿಳಿಸಿದರು. ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮಂಡ್ಯ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ 2025-2026 ನೇ ಸಾಲಿನ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿರವರ ಸಂಸ್ಮರಣ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ […]

    The post ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಜಕಣಾಚಾರಿ : ಕೆ.ಆರ್. ನಂದಿನಿ appeared first on nudikarnataka.



    ಕಲೆಗೆ ಶ್ರದ್ದೆಗೆ ಮತ್ತು ಶಕ್ತಿಗೆ ಕೊನೆ ಇಲ್ಲ ಎಂಬುದನ್ನು ನಿರೂಪಿಸಿದವರು ಹಾಗೂ ಲೇಖನಿಯಲ್ಲೇ ಕಾವ್ಯ ಬರೆಯುವುದು ಕಷ್ಟಕರ, ಆಂತದರಲ್ಲಿ ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಅಮರಶಿಲ್ಪಿ ಜಕಣಾಚಾರಿ ಎಂದು ಮಂಡ್ಯ ಜಿ.ಪಂ.ಸಿಇಓ ಕೆ.ಆರ್ ನಂದಿನಿ ತಿಳಿಸಿದರು.

    ಮಂಡ್ಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮಂಡ್ಯ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ 2025-2026 ನೇ ಸಾಲಿನ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿರವರ ಸಂಸ್ಮರಣ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

    ನಿಷ್ಠೆ,ಛಲ,ಹಠ, ಕಲೆ ಮತ್ತು ಸಾಧನೆ ಮಾಡುವ ಗುರಿ ಹೊಂದಿದ ವ್ಯಕ್ತಿಯಿಂದ ಮಾತ್ರ ಕಲ್ಲಿನಲ್ಲಿ ಕಾವ್ಯ ಕೆತ್ತಲು ಸಾಧ್ಯ. ಅಮರಶಿಲ್ಪಿ ಜಕಣಾಚಾರ್ಯ ಅವರು ಯಾವುದೇ ಕೆಲಸವಾದರೂ ಶ್ರದ್ದೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುತ್ತಿದ್ದರು. ಇವತ್ತಿನ ಯುವ ಪೀಳಿಗೆ ಅಮರಶಿಲ್ಪಿ ಜಕಣಾಚಾರಿ ಸ್ಪೂರ್ತಿ ಎಂದು ಹೇಳಿದರು.

    ಸಾಮಾನ್ಯರಿಗೆ ಕಲ್ಲು ಕಲ್ಲಾಗಿ ಕಂಡರೆ ಅಮರಶಿಲ್ಪ ಜಕಣಚಾರ್ಯ ಅವರಿಗೆ ಕಲ್ಲು ಭಕ್ತಿಯ ಸ್ವರೂಪದಲ್ಲಿ ಗೋಚರಿಸುತ್ತಿತ್ತು ಅಂತಹ ಭಕ್ತಿಯ ಆಂತರ್ಯದ ದೃಷ್ಟಿಯನ್ನು ಚೇತನರು ಹೊಂದಿದ್ದರು. ವಿಶ್ವದಾದ್ಯಂತ ಕಲೆಗಳಿಗೆ ಜಕಣಾಚಾರ್ಯ ಅವರು ಸಹಕಾರ ಮೂರ್ತಿಯಾಗಿ ಕಾಣುತ್ತಾರೆ. ಕಲೆಯನ್ನು ಪ್ರತಿನಿಧಿಸುವ ಸಾಂಸ್ಕೃತಿಕ ರಾಯಭಾರಿಯಾಗಿ ಅಮರಶಿಲ್ಪಿ ಜಕಣಚಾರಿ ನಿಲ್ಲುತ್ತಾರೆ ಎಂದು ಹೇಳಿದರು.

    ಜಕಣಚಾರ್ಯ ಅವರು ಕೇವಲ ವ್ಯಕ್ತಿಯಾಗಿ ಅಲ್ಲದೆ ಶ್ರಮದ ಸಂಕೇತವಾಗಿ ನಾವು ನೋಡಬಹುದು. ಯುವ ಪೀಳಿಗೆ ಅವರು ಜಗತ್ತಿಗೆ ನೀಡಿದ ಮೌಲ್ಯ ಮತ್ತು ಆದರ್ಶಗಳನ್ನು ತಿಳಿದುಕೊಳ್ಳಬೇಕು. ನಿಷ್ಠೆ ಪ್ರಾಮಾಣಿಕತೆ ಶ್ರದ್ಧೆ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಕಾಣಬಹುದು. ವ್ಯಕ್ತಿಗಳಿಗೆ ಆಪತ್ತು ಸಂಭವಿಸಬಹುದು ಆದರೆ ವ್ಯಕ್ತಿಯ ಕಲೆಗಳಿಗೆ ವಿಪತ್ತು ಸಂಭವಿಸುವುದಿಲ್ಲ ಎಂದು ಹೇಳಿದರು.

    ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಬೋರೇಗೌಡ ಅವರು ಸರ್ಕಾರದಿಂದ ವಿಶ್ವಕರ್ಮ ಸಮಾಜವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸ್ವಾವಲಂಬಿಯಾಗಿಸಲು ನೀಡಲಾಗುತ್ತಿರುವ ಗಂಗಾ ಕಲ್ಯಾಣ ಯೋಜನೆ ಸ್ವಾವಲಂಬಿ ಸಾರಥಿ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳ ಕುರಿತು ಸಭಿಕರಿಗೆ ಮಾಹಿತಿ ನೀಡಿದರು.

    ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್ ಅವರು ವಿಶ್ವಕರ್ಮ ಸಮಾಜದ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಪಡೆಯಬಹುದಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

    ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆಆರ್ ನಂದಿನಿ ಅವರು ವಿಶ್ವಕರ್ಮ ಸಮಾಜದಲ್ಲಿ ವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.

    ಕಾರ್ಯಕ್ರಮದಲ್ಲಿ ಮುಡಾ ಜಿಲ್ಲಾ ಅಧ್ಯಕ್ಷ ಬಿ.ಪಿ ಪ್ರಕಾಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುಮಲಾಚಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ವಿಶ್ವಕರ್ಮ ಸಮಾಜದ ಮುಖಂಡರುಗಳಾದ ಸುದರ್ಶನ್,ರಮೇಶ್,ಸೋಮಶೇಖರ್ ಶ್ರೀನಿವಾಸ್ ಮತ್ತಿತರರು ಇದ್ದರು.

    ಮೆರವಣಿಗೆಗೆ ಚಾಲನೆ

    ವರ್ಣರಂಜಿತಾ ಬೆಳ್ಳಿ ರಥದ ಮೇಲೆ ಇರಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಪುಷ್ಪಾರ್ಚನೆ ಮಾಡಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

    ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಸಂಚರಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ತಲುಪಿತು.

    The post ಕಲ್ಲಿನಲ್ಲಿ ಕಾವ್ಯ ಬರೆದ ಮಹಾನ್ ಚೇತನ ಜಕಣಾಚಾರಿ : ಕೆ.ಆರ್. ನಂದಿನಿ appeared first on nudikarnataka.

    Click here to Read More
    Previous Article
    ಹೊಸ ವರ್ಷಾಚರಣೆ, ಕ್ರಿಸ್ಮಸ್‌ ಸಡಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ 9.42 ಲಕ್ಷ ರೂ.‌ವಸೂಲಿ
    Next Article
    ಯಲಹಂಕ | ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment